31 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೨.👊
30 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೧.👊
29 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೦.👊
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೦.👊
ಈ ಆನಂದಾಶ್ರಮ ಸ್ಥಾಪಿಸುವ ಮೊದಲುˌ ತನ್ನ ಮಡದಿ ಮಗಳನ್ನ ತ್ಯಜಿಸಿ ಸಂಪೂರ್ಣ ವಿರಾಗಿಯಾಗುವ ಮುನ್ನ ಪೂರ್ವಾಶ್ರಮದ ವಿಠ್ಠಲರಾಯರು ಪರಿವ್ರಾಜಕರಾಗಿ ಭಕ್ತಿಮಾರ್ಗದ ಅನ್ವೇಷಣೆಯಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೂ ಭಾರತದ ಉದ್ದಗಲ ಸುತ್ತಿದ್ದಾರೆ. ಅದೂ ಸಹ ಕೈಯಲ್ಲಿ ದುಗ್ಗಾಣಿಯನ್ನೂ ಇಟ್ಟುಕೊಳ್ಳದೆ! ಯಾವುದೆ ಐಶಾರಾಮ ಬಯಸದೆ. ಈಗಿನಷ್ಟು ಸಾರಿಗೆ ಸಂಪರ್ಕದ ಅನುಕೂಲವಿದ್ದಿರದಿದ್ದ ಶತಮಾನದ ಹಿಂದೆ ಈ ದೈವಭಕ್ತಿಯಿಂದ ಪರವಶರಾಗಿದ್ದ ಜೀವ ಈ ಗುರಿಯಿಲ್ಲದ ಪಯಣದ ಹಾದಿಯಲ್ಲಿ ಅದೆಂತೆಂತಹ ಕಷ್ಟ-ನಷ್ಟಗಳನ್ನು ಎದುರಿಸಿರಬಹುದೋ ಏನೋ? ಎಂದು ಯೋಚಿಸಿಯೆ ಇವನು ಅಳುಕಿದ.
ವಾಸ್ತವದಲ್ಲಿ ಬಾಲಕೃಷ್ಣರಾಯರದ್ದು ಒಂಬತ್ತು ಗಂಡು ಹಾಗೂ ಮೂರು ಹೆಣ್ಣು ಕೂಸುಗಳಿದ್ದ ತುಂಬು ಸಂಸಾರ. ಅದರಲ್ಲಿ ಅಧ್ಯಾತ್ಮದ ಹಾದಿ ಹಿಡಿದದ್ದು ವಿಠ್ಠಲರಾಯರು ಮಾತ್ರ. ತಮ್ಮ ಕಪಟವಿಲ್ಲದ ವ್ಯಕ್ತಿತ್ವದಿಂದ ಸುಲಭವಾಗಿ ಮೋಸಗಾರರ ಬಲೆಗೆ ಸಿಲುಕಿದ ಅವರು ತಮ್ಮ ಜವಳಿ ಉದ್ಯಮದಲ್ಲಿ ವಿಫಲವಾದರೇನಂತೆ? ಅವರಂದು ಬಿತ್ತಿದ್ದ ಅಧ್ಯಾತ್ಮದ ಹಾದಿಯಲ್ಲಿ ಅವರಿತ್ತಿರುವ ನಾಮ-ಧ್ಯಾನ-ಸೇವಾದ ಮೇಲ್ಪಂಕ್ತಿಯನ್ನ ಅನುಸರಿಸಿ ಶುದ್ಧ ಚಾರಿತ್ರ್ಯದಿಂದ ಬದುಕಲು ಕಲಿಯುತ್ತಿರುವವರ ಸಂಖ್ಯೆ ವಿಫುಲವಾಗಿದೆ. ಇದೊಂದೆ ಸಾಧನೆ ಸಾಕಲ್ಲ ಅವರ ಪ್ರಭಾವಳಿಯನ್ನ ಗ್ರಹಿಸಲು. ಆರರಿಂದ ಅರವತ್ತರವರೆಗೂ ಅನ್ನುತ್ತಾರಲ್ಲ ಹಾಗೆ ಎಲ್ಲಾ ಪ್ರಾಯದವರೂ ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದಾರೆ.
ಯಾರಿಗೆ ತಾನೆ ಗೊತ್ತಿತ್ತು ೧೮೮೪ಕ್ಕೆ ಬಾಲಕೃಷ್ಣರಾಯರ ಮಡದಿ ಲಲಿತಾಬಾಯಿಗೆ ಹುಟ್ಟಿದ್ದ ಈ ಆರನೆ ಕೂಸು ಮುಂದೊಂದು ದಿನ ಬಹಳಷ್ಟು ಪಥಭ್ರಷ್ಟರಿಗೆ ಮಾರ್ಗದರ್ಶಕನಾಗುತ್ತಾನಂತ? ಸ್ವಂತ ಬದುಕಿನಲ್ಲಿ ಅವರೆದುರಿಸಿದ ಆ ವೈಫಲ್ಯಗಳ ಸರಣಿಯೆ ಸಾರ್ವತ್ರಿಕ ಬದುಕಿನಲ್ಲಿ ಅಘೋಷಿತ ಗೆಲುವನ್ನವರು ಕೈವಶ ಮಾಡಿಕೊಳ್ಳಲು ಕಾರಣವಾದದ್ದು ಮಾತ್ರ ಕಾಕತಾಳೀಯವಲ್ಲದೆ ಮತ್ತಿನ್ನೇನೂ ಅಲ್ಲ ಅನಿಸಿತವನಿಗೆ.
ಅವರ ಆರ್ಥಿಕ ನಷ್ಟದ ಕೊನೆಯಲ್ಲಿ ಅವರ ಬಟ್ಟೆಗೆ ಬಣ್ಣ ಹಾಕುವ ಉದ್ಯಮದ ಹಾಗೂ ಜವಳಿಯಂಗಡಿಯ ಸಂಪೂರ್ಣ ಮಾಲಕತ್ವ ವಹಿಸಿಕೊಳ್ಳಲು ಮನಸು ಮಾಡಿದ ಸಹೃದಯಿ ಗೆಳೆಯನ ಕೃಪೆಯಿಂದ ಅವರ ಸಾಲಗಳೆಲ್ಲಾ ತೀರಿˌ ಮಡದಿ ಮಗಳಿಗೂ ಒಂದು ದಿಕ್ಕು ತೋರಿಸಿˌ ಮುಂದಿನ ಅಧ್ಯಾತ್ಮದ ಹಾದಿ ಹುಡುಕುವ ಈ ಆನಂದಾಶ್ರಮದ ಸ್ಥಾಪನೆಗೂ ಅಗತ್ಯವಿರುವಷ್ಟು ಹಣ ಉಳಿಸಲು ಅವರಿಗೆ ಸಾಧ್ಯವಾಯ್ತು.
ಪತ್ನಿಗೆ ತನ್ನ ನಿರ್ಧಾರ ತಿಳಿಸಿ ಅವರ ಜೀವನೋಪಾಯಕ್ಕೆ ಒಂದು ವ್ಯವಸ್ಥೆ ಮಾಡಿದ ವಿಠ್ಠಲರಾಯರು ಕಡೆಗೂ ೧೯೨೨ರ ಡಿಸೆಂಬರ್ ೨೮ರಂದು ಮನೆ ಬಿಟ್ಟು ಇಂದಿನ ತಮಿಳುನಾಡಿನ ಶ್ರೀರಂಗಂ ತಲುಪಿದರು. ಅಲ್ಲಿ ಕಾವೇರಿಯಲ್ಲಿ ಮಿಂದು ಅಂದಿನಿಂದ ಬಣ್ಣಬಣ್ಣದ ವಸ್ತ್ರಗಳನ್ನೂ ತ್ಯಜಿಸಿ ಕೇವಲ ಬಿಳಿಯನ್ನುಟ್ಟುˌ ತನ್ನ ಹೆಸರನ್ನೂ ಕೈಬಿಟ್ಟು ಅಂದಿನಿಂದ ಸಂಪೂರ್ಣವಾಗಿ ಭಗವಂತ ಶ್ರೀರಾಮಚಂದ್ರನ ಸೇವೆಗೆ ತನ್ನನ್ನ ತಾನು ಒಪ್ಪಿಸಿಕೊಂಡು ವಿಠ್ಠಲರಾಯನ ಗುರುತಿನಿಂದ ಬಿಡುಗಡೆಯಾಗಿ ಶಾಶ್ವತವಾಗಿ ಸ್ವಾಮಿ ರಾಮದಾಸರಾಗಿ ತಮ್ಮನ್ನ ಗುರುತಿಸಿಕೊಂಡರು.
*****
ಸ್ವಾಮಿ ರಾಮದಾಸರ ಆರಂಭದ ಶಿಷ್ಯೆಯಾಗಿದ್ದ ಕೃಷ್ಣಾಬಾಯಿಯವರದ್ದು ಇನ್ನೊಂದು ಕಥೆ. ತನ್ನ ಸನ್ಯಾಸ ಸ್ವೀಕಾರದ ನಂತರ ಪರಿವ್ರಾಜನೆ ಮುಗಿಸಿ ಮಂಗಳೂರಿನ ತನ್ನ ಸಹೋದರನ ಮನೆಗೆ ಹಿಂದಿರುಗಿದ ರಾಮದಾಸರು ಅಲ್ಲಿ ತಂಗದೆ ಕದ್ರಿಯಲ್ಲಿರುವ ಪಾಂಡವರ ಗುಹೆಗೆ ಹೋಗಿ ಅಧ್ಯಾತ್ಮ ಸಾಧನೆಗೆ ತೊಡಗಿದರು. ಅಲ್ಲಿದ್ದಷ್ಟೂ ಕಾಲ ಕೇವಲ ದಿನಕ್ಕೆರಡು ಸಲ ಹಾಲು ಹಣ್ಣು ಮಾತ್ರ ಸ್ವೀಕರಿಸುತ್ತಾ ಬೆಳ್ಳಂಬೆಳಗ್ಯೆ ಮೂರೂವರೆಗೆ ಎದ್ದು ಅತಃರ್ಮನನದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿದ್ದ ಅವರು ಮತ್ತೊಂದು ಸುತ್ತು ತೀರ್ಥಯಾತ್ರೆ ಕೈಗೊಳ್ಳಲು ರಾಮೇಶ್ವರದಿಂದ ಹೊರಟು ಹೃಷಿಕೇಶದವರೆಗೂ ಅನೇಕ ಪುಣ್ಯಕ್ಷೇತ್ರಗಳನ್ನ ಸುತ್ತಿ ಮರಳಿ ಮಂಗಳೂರಿಗೆ ಬಂದವರು ಪುನಃ ಅದೆ ಪಾಂಡವರ ಗುಹೆಯಲ್ಲಿ ಮತ್ತೆರಡು ತಿಂಗಳು ತಂಗಿದರು. "ನಾನು" "ನನ್ನದು" ಅನ್ನುವ ಭಾವದಿಂದ ಸಂಪೂರ್ಣ ವಿಮಖರಾಗಿದ್ದ ಅವರೀಗ ಬೇರೆಯದೆ ಮನಸ್ಥಿತಿಗೆ ಪಕ್ಕಾಗಿದ್ದದ್ದು ಸ್ಪಷ್ಟವಾಗಿತ್ತು.
ಅದರ ಫಲವಾಗಿ ೧೯೨೮ರ ಜೂನ್ ಮೂರಕ್ಕೆ ಮೊದಲೆ ಹೇಳಿದ ಹಾಗೆ ಕಾಸರಗೋಡಿನಲ್ಲಿ ಆರಂಭದಲ್ಲಿದ್ದ ಆನಂದಾಶ್ರಮವನ್ನ ಪ್ರಾರಂಭಿಸಿದ್ದು. ಅಲ್ಲಿಯೆ ಅವರನ್ನ ಮಾತೆ ಕೃಷ್ಣಾಬಾಯಿ ಪ್ರಥಮವಾಗಿ ಅದೆ ವರ್ಷ ಭೇಟಿಯಾಗುವಾಗ ಅವರ ಪ್ರಾಯ ಕೇವಲ ೨೫ ವರ್ಷಗಳು ಮಾತ್ರವಾಗಿತ್ತು. ಅಂದಿನ ಪದ್ಧತಿಯಂತೆ ತನ್ನ ಹನ್ನೆರಡರ ಪ್ರಾಯದಲ್ಲೆ ಬಾಲ್ಯ ವಿವಾಹವಾಗಿದ್ದ ಕೃಷ್ಣಾಬಾಯಿ ಕೇವಲ ಇಪ್ಪತ್ತರ ಪ್ರಾಯದಲ್ಲೆ ಇಬ್ಬರು ಗಂಡು ಮಕ್ಕಳ ತಾಯಿಯೂ ಆಗಿ ಗಂಡನನ್ನೂ ಸಹ ಕಳೆದುಕೊಂಡು ವೈಧವ್ಯವನ್ನ ಅನುಭವಿಸುತ್ತಿದ್ದ ಕಾಲ ಅದು.
ಮುಂಬೈಯಲ್ಲಿ ನೆಲೆಸಿದ್ದ ಕೃಷ್ಣಾಬಾಯಿ ಬದುಕಿನ ಏರುಪೇರುಗಳಿಂದ ವಿಚಲಿತಳಾಗಿ ಒಮ್ಮೆ ವಿಫಲ ಆತ್ಮಹತ್ಯಾ ಯತ್ನವನ್ನೂ ಸಹ ನಡೆಸಿದ್ದರು! ಆದರೂ ಬದುಕುಳಿದ ನಂತರ ಗೃಹಸ್ಥ ಜೀವನದಿಂದ ದೂರಾಗಲು ನಿರ್ಧರಿಸಿ ಧಾರವಾಡದ ತನ್ನ ಸಂಬಂಧಿಕರ ಮನೆಗೆ ಬಂದಿದ್ದಾಗ ಹುಬ್ಬಳ್ಳಿಯಲ್ಲಿ ಸಿದ್ಧಾರೂಢರನ್ನ ಕಂಡು ಅವರಿಂದ ಮಂತ್ರದೀಕ್ಷಿತರಾದರು. ಸ್ವಾಮಿ ರಾಮದಾಸರ ಬಗ್ಗೆ ಕೇಳಿದ್ದ ಅವರು ಕಾಸರಗೋಡಿಗೆ ಬಂದು ಅವರನ್ನ ಭೇಟಿಯಾಗಿ ತನ್ನ ಮನೋಭಿಲಾಶೆಯನ್ನ ತೋಡಿಕೊಂಡರು. ಆದರೆ ಆಗವರಿಗೆ ಆಶ್ರಮವಾಸದ ಅನುಮತಿ ಸಿಗದೆ ಮರಳಿ ಮುಂಬೈಗೆ ಹೋಗುವಂತೆ ರಾಮದಾಸರು ಇತ್ತ ಸೂಚನೆ ಪಾಲಿಸಿದರು.
ಆದರೆ ಅಲ್ಲೂ ಇರಲಾರದೆ ಮರಳಿ ಕಾಸರಗೋಡಿನ ಆನಂದಾಶ್ರಮಕ್ಕೇನೆ ಮರಳಿ ಬಂದರಂತೆ. ಆದರೆ ಕೆಲಕಾಲ ಅಲ್ಲಿ ರಾಮದಾಸರˌ ಅವರ ಅಸ್ತಮಾ ಪೀಡಿತ ತಂದೆ ಹಾಗೂ ಪೂರ್ವಾಶ್ರಮದ ಮಡದಿಯೊಂದಿಗೆ ತಂಗಿದ್ದರೂ ಸಹ ಶಾಶ್ವತ ಸನ್ಯಾಸಿನಿಯಾಗಲು ರಾಮದಾಸರು ಅನುಮತಿಸಲಿಲ್ಲ. ಬದಲಿಗೆ ಅವರ ಪುಟ್ಟ ಮಕ್ಕಳ ಜವಬ್ದಾರಿಯನ್ನ ನೆನಪಿಸಿದ ಗುರುಗಳು ಮರಳಿ ಅವರನ್ನ ಮುಂಬೈಗೇನೆ ಕಳಿಸಿದರಂತೆ. ಒಲ್ಲದ ಮನಸಿನಿಂದ ಮುಂಬೈಗೆ ಮರಳಲಿಚ್ಚಿಸದ ಕೃಷ್ಣಾಬಾಯಿ ಒಂದು ಸಂಜೆ ಆಶ್ರಮದಿಂದಲೂ ಕಾಣೆಯಾಗಿ ಬಳಿಯ ಕಾಡಿನ ಬೆಟ್ಟದಲ್ಲಿ ಅಳುತ್ತಾ ರಾತ್ರಿ ಕಳೆದರು. ಬೆಳ್ಳಂಬೆಳಗ್ಯೆ ಅವರಿಗೆ ಹಾವೊಂದು ಕಚ್ಚಿ ಪ್ರಾಣಾಪಾಯಕ್ಕೂ ಒಳಗಾದರು. ಈ ವಿಷಯ ತಿಳಿದು ಹೌಹಾರಿದ ರಾಮದಾಸರು ಅವರನ್ನ ಆಶ್ರಮಕ್ಕೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಿ ಉಳಿಸಿಕೊಂಡರು. ಚೇತರಿಕೆಯ ನಂತರ ಅವರ ಸಾಂಸಾರಿಕ ಜವಬ್ದಾರಿಯನ್ನ ನೆನಪಿಸಿದ ಅಧ್ಯಾತ್ಮಿಕ ಗುರುಗಳು ಮೊದಲು ಅದನ್ನ ಪೂರೈಸಿ ಬರುವಂತೆ ನಿರ್ದೇಶನವನ್ನಿತ್ತು ಅವರಿಗೆ ರಾಮನಾಮದ ಮಂತ್ರ ದೀಕ್ಷೆ ಇತ್ತರು.
ಅವರ ಆಜ್ಞೆಯಂತೆ ಮುಂಬೈ ಮರಳಿದ ಕೃಷ್ಣಾಬಾಯಿ ಮಕ್ಕಳಿಬ್ಬರಿಗೂ ತನ್ನ ನಿರ್ಧಾರ ತಿಳಿಸಿˌ ಅವರ ಒಪ್ಪಿಗೆ ಪಡೆದುˌ ಅವರ ದೇಖಾರೇಖಿಯ ಜವಬ್ದಾರಿಯನ್ನ ಸಮೀಪದ ಬಂಧುಗಳಿಗೆ ಒಪ್ಪಿಸಿ ಸನ್ಯಾಸಿನಿಯಾಗಿರುವ ದೃಢ ನಿಶ್ಚಯದೊಂದಿಗೆ ಕಾಸರಗೋಡಿನಲ್ಲಿದ್ದ ಆನಂದಾಶ್ರಮಕ್ಕೆ ಮರಳಿ ಬಂದರು. ಅಲ್ಲಿಂದ ಅವರೂ ಸಹ ಆಶ್ರಮದ ಖಾಯಂ ನಿವಾಸಿಗಳಾಗಿ ಹೋದರು. ಆದರೆ ಸಹಜವಾಗಿ ಒಬ್ಬ ಯುವ ವಿಧವೆ ಹೀಗೆ ಅಜ್ಞಾತ ಗಂಡಸಿನೊಂದಿಗೆ ವಾಸಿಸುವುದು ಆಶ್ರಮದ ಭಕ್ತಾದಿಗಳ ಜೊತೆಜೊತೆಗೆ ಸುತ್ತಮತ್ತಲಿನ ಸ್ಥಳಿಯರ ವದಂತಿಗಳಿಗೆ ಕಾರಣವಾಯ್ತು.
ಆಗ ನಡೆದದ್ದೆ ಈ ದಾಳಿಯ ಪ್ರಕರಣ. ಕೆಲವರ ಪ್ರಕಾರ ಅದನ್ನ ನಡೆಸಿದ್ದು ಆಶ್ರಮದ ಒಬ್ಬ ನೌಕರ. ಮತ್ತೆ ಕೆಲವರನ್ನುವ ಮಾತನ್ನ ನಂಬವದಾದರೆ ಆಶ್ರಮಕ್ಕೆ ಒಂದು ರಾತ್ರಿ ನುಗ್ಗಿದ ಕಳ್ಳರಿಬ್ಬರು ಹರೆಯದ ಕೃಷ್ಣಾಬಾಯಿಯವರನ್ನ ಕೆಡಿಸಲು ನೋಡಿದರುˌ ಗಟ್ಟಿಯಾಗಿ ಆಗವರು ಉಚ್ಛರಿಸಿದ ರಾಮನಾಮ ಸ್ಮರಣೆ ಅವರ ಮಾನ ಉಳಿಸಿತು. ಕಳ್ಳರು ಪರಾರಿಯಾದರು. ಕಾಸರಗೋಡಿನ ಬಂಧ ಹಾಗೆ ಕಳಚಿತು.
( ಇನ್ನೂ ಇದೆ.)
https://youtu.be/D3OL3ayuQuU
28 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೯.👊
27 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೮.👊
26 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೭.👊
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೬.👊
25 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೫.👊
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೪.👊
24 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೩.👊
23 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೨.👊
22 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೧.👊
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೧.👊
ಇಷ್ಟಲ್ಲದಿದ್ದರೆ ಇಡಿ ದೇಶವನ್ನೆ ಅದೂ ಹತ್ತು ಹದಿನೈದು ವರ್ಷಗಳಿಂದ ಕೇವಲ ತನ್ನ ಪ್ರಭಾವಳಿಯನ್ನ ಹೆಚ್ಚಿಸಿಕೊಳ್ಳುವ ಪುಂಖಾನುಪುಂಖವಾದ ಹುಸಿ ವದಂತಿಗಳನ್ನ ಹಬ್ಬಿಸಿಯೆ ನಿರಂತರವಾಗಿ ಏಮಾರಿಸಲು ಗಡ್ಡಬಿಟ್ಟ ಒಬ್ಬ ಮಡ್ಡನಿಗೆ ಸಾಧ್ಯವಾಗುತ್ತಿತ್ತಾ ಅಂತ ಯೋಚಿಸಿದವನಿಗೆ ನಗು ಬಂತು.
ನಮ್ಮ ದೇಶದಲ್ಲಿ ಬಾಯಿ ಬಡಾಯಿಕೋರರಿಗೆ ಹಾಗೂ ಛದ್ಮವೇಶಧಾರಿಗಳಿಗೆ ಸಿಗುವಷ್ಟು ಮರ್ಯಾದೆ ಬಹುಶಃ ಇನ್ಯಾವ ಸಭ್ಯಸ್ಥ ಸರಳ ಬದುಕಿನ ನೇರ ನಡೆ ನುಡಿ ಹೊಂದಿರುವವರಿಗೆ ಸಿಗುವುದಿಲ್ಲ ಅನ್ನೋದು ಕರಾಳ ವಾಸ್ತವ. ದೇಶದ ಅಧೋಗತಿಗೂ ಬಹುತೇಕ ಅದೆ ಕಾರಣವೆನ್ನುವ ಸತ್ಯಾಂಶ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿದ್ದರೂ ಅಯೋಗ್ಯರ ವ್ಯಕ್ತಿಪೂಜೆಗಿಳಿವ ಅತಿಬುದ್ಧಿವಂತರು ತಮ್ಮ ಹುಟ್ಟು ಚಾಳಿಯನ್ನ ಸುಟ್ಟರೂ ಬಿಡಲೊಲ್ಲರು.
ನಿತ್ಯಾನಂದರೇನು ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದವರಲ್ಲ. ಹಾಗಂತ ಅನಕ್ಷರಸ್ಥರೂ ಆಗಿರಲಿಲ್ಲ. ಮಾತೃಭಾಷೆ ಮಲಯಾಳಂ ಜೊತೆಗೆ ಕನ್ನಡˌ ಸ್ವಲ್ಪ ಮಟ್ಟಿಗೆ ಹಿಂದಿ ಹಾಗೂ ಇಂಗ್ಲಿಷ್ ಎರಡನ್ನೂ ಓದಿ ಬರೆಯವಷ್ಟು ಅಕ್ಷರ ಜ್ಞಾನ ಅವರಿಗಿತ್ತು. ಮನೆಭಾಷೆ ಮಲಬಾರಿ ಮಲಯಾಳಂ ಜೊತೆಗೆ ಸರಾಗವಾಗಿ ತುಳುˌ ತುಳುನಾಡಿನ ಧಾಟಿಯ ಕನ್ನಡˌ ಗೋವನಿ ಕೊಂಕಣಿˌ ಗಾಂವಟಿ ಮರಾಠಿˌ ಮುಂಬೈಯಾ ಹಿಂದಿ ಹಾಗೂ ತಕ್ಕ ಮಟ್ಟಿಗೆ ಇಂಗ್ಲೀಷಿನಲ್ಲೂ ಸಂವಹಿಸಲು ಅವರಿಗೆ ಸಾಧ್ಯವಿತ್ತು.
ಇಂದಿನ ಸ್ವಯಂಘೋಷಿತ ದೇವಮಾನವರಂತೆ ಅವರು ಭಕ್ತಾದಿಗಳಲ್ಲಿ ಬೇಧವೆಣಿಸಲಿಲ್ಲˌ ಹೆಸರೆ ಹೇಳಲಂಜುವ ಕಾಙಂನಗಾಡಿನ ಕೊರಗನಿಂದ ಹಿಡಿದುˌ ಮುಂಬೈಯ ಹೊಟೇಲುದ್ಯಮಿˌ ಸೂರತಿನ ಸಿಂಧಿ ವಜ್ರೋದ್ಯಮಿˌ ಆ ಕಾಲದ ದೊಡ್ಡ ಸಾಹುಕಾರ ಲಕ್ಷ್ಮಣ ಸಾ ಖೋಡೆಯವರೆಗೆ ಅವರಿಗೆ ಎಲ್ಲರೂ ಸರಿಸಮಾನರು. ಯಾವುದೆ ತೋರಿಕೆಯ ಆಡಂಬರದಿಂದ ದೂರವಿದ್ದ ಅವರದ್ದು ಕೌಪಿನವೊಂದೆ ಶಾಶ್ವತ ಧಿರಿಸು. ಸುಗಂಧ ಪೂಸಿಕೊಂಡು ಸೌಂದರ್ಯ ಪ್ರಸಾದನಗಳನ್ನ ಬಳಸಿಕೊಂಡು ದೊಡ್ಡಾಟವಾಡುವ ಕಳ್ಳಗುರುಗಳೆಲ್ಲ ಅವರಿಗೆ ಈಡಲ್ಲ. ವಾಸ್ತವದ ಅಧ್ಯಾತ್ಮಿಕತೆಯ ಜಿಜ್ಞಾಸುಗಳು ಹಿಂಬಾಲಿಸಬೇಕಿರೋದು ಅಸಲಿ ಭಗವಾನ್ ನಿತ್ಯಾನಂದರನ್ನೆ ಹೊರತು ಇಂದಿನ ನಕಲಿ ಭಗ"ವಾನರ" ನಿತ್ಯ ಆನಂದಿಗಳನ್ನಂತೂ ಅಲ್ಲವೆ ಅಲ್ಲ.
ತೋರಿಕೆಗೆ ಅವರೆಂದೂ ಢೋಂಗಿ ಇಂದ್ರಜಾಲದ ಕಣ್ಕಟ್ಟು ತೋರಿಸಿ ಜನರನ್ನ ವಂಚಿಸಲಿಲ್ಲ. ನೂರೆಂಟು ಸ್ಕೀಮುಗಳನ್ನ ಹೇಳಿಕೊಂಡು ಬಂದು ಸಂಗ್ರಹಿಸಿದ ದೇಣಿಗೆಯಲ್ಲಿ ಈ ಕಾಲದ ಸತ್ತಕುರುಗಳಂತೆ ಬಿಎಂಡಬ್ಲೂ ಬೈಕು ಖರೀದಿಸಿ ಫೋಸು ಕೊಡಲಿಲ್ಲˌ ಕ್ಯಾರವಾನ್ ಕಾರು ಖರೀದಿಸಿ ಭಾರತದ ಮಣ್ಣು ಉಳಿಸಲು ಅಮೇರಿಕಾದ ಮಣ್ಣಿನಲ್ಲಿ ಜಾಲಿಟ್ರಿಪ್ಪು ಹೊಡೆಯಲಿಲ್ಲ. ಕರಡಿಯಂತೆ ಕೆದರಿದ ಕೂದಲು ಬಿಟ್ಟುಕೊಂಡು ದಿನಕ್ಕೊಂದು ರಂಗುರಂಗಿನ ನೈಟಿ ಹಾಕಿಕೊಂಡು ಬೀದಿ ಬದಿಯ ದೊಂಬರಂತೆ ಅಗ್ಗದ ಜಾದೂ ಮಾಡಿಕೊಂಡು ಜನರ ಮೇಲೆ ಮಂಕು'ಬೂದಿ' ಎರಚಲಿಲ್ಲ. ಮೈಕು ಸಿಕ್ಕ ಕೂಡಲೆ ಲೌಡಿಕದ್ದೆಯ ಕುರುಕುರು ಛೀಗಳಂತೆ ಕನಿಷ್ಠ ಪಕ್ಷ "ಒಂದೆ"ಗೂ "ವಂದೆ"ಗೂ ವ್ಯತ್ಯಾಸವನ್ನರಿಯದೆ ಉದ್ದುದ್ದ ಭಾಷಣ ಚೂಡಿ ಜನರನ್ನ ಏಮಾರಿಸಲಿಲ್ಲ.
ಅದೆಲ್ಲ ಹೋಗಲಿ ತನ್ನನ್ನ ತಾನು ಗುರುವೆಂದೆ ಎಂದೂ ಬೋರ್ಡು ಹಾಕಿಕೊಂಡು ತಿರುಗಲಿಲ್ಲ. ವಾಸ್ತವದಲ್ಲಿ ಜನರಿಂದ ದೂರಕ್ಕೆ ಉಳಿದು ಅಗತ್ಯ ಬಿದ್ದಾಗ ಮಾತ್ರ ಹತ್ತಿರ ಕರೆದು ಅವರ ಸಮಸ್ಯೆಗಳನ್ನ ಆಲಿಸಿದರು. ತನ್ನಿಂದಾಗುವ ಪರಿಹಾರ ಸೂತ್ರವನ್ನ ಬೋಧಿಸಿದರು. ನಿಜವಾದ ಆ ಭಗವಂತ ಈ ಭೂಮಿಯ ಮೇಲೆ ನಡೆದರೆ ಹೇಗಿರಬಹುದೋ ಹಾಗೆ ಬಾಳಿ ತೋರಿಸಿದರು. ಶಿರಡಿಯ ಸಾಯಿಬಾಬಾˌ ಮುಕುಂದೂರು ಸ್ವಾಮಿಗಳುˌ ಹುಬ್ಬಳ್ಳಿಯ ಸಿದ್ಧಾರೂಢರುˌˌ ಶ್ರೀಧರ ಸ್ವಾಮಿಗಳಷ್ಟೆ ಸರಳರು ಪೂಜ್ಯರು ಆಗಿದ್ದವರೆ ಈ ಅವನ ಪಾಲಿನ "ಅಜ್ಜ" ನಿತ್ಯಾನಂದರು.
ಆದರೂ ಅವರಿದ್ದಾಗಲಾಗಲಿˌ ಹೋದ ಮೇಲಾಗಲಿ ಅವರ ಭಕ್ತಾದಿಗಳಾದವರಿಗೆ ಬರವಿಲ್ಲ. ಯಾವುದೆ ಚಿಲ್ಲರೆ ಶೋಕಿ ಮಾಡದೆˌ ಕೇವಲ ಕೌಪೀನ ಮಾತ್ರ ಧರಿಸಿಕೊಂಡಿದ್ದುˌ ಯಾರ ಊಹೆಗೂ ಎಟುಕದೆˌ ನಿತ್ಯ ಪರಿವ್ರಾಜಕರಾಗಿದ್ದುಕೊಂಡು ದೀನ-ದಲಿತರ ಸೇವೆಗೆ ಸಮಾಜವನ್ನ ಹುರಿದುಂಬಿಸಿಕೊಂಡಿದ್ದ ಅವರೆಂದೂ ಇಂದಿನ ತಥಾಕಥಿತ ಗುರೂಜಿಗಳಂತೆ ಧರ್ಮದ ವ್ಯಾಪಾರಕ್ಕೆ ಅಂಗಡಿ ತೆರೆದು ಕೂರಲಿಲ್ಲ.
ಆದರೂˌ ಅವರ ಅಪಾರ ಹಿಂಬಾಲಕರು ಅವರ ಕರ್ಮಭೂಮಿ ಕಾಙಂನಗಾಡಿನಲ್ಲೂˌ ಕೊನೆಯ ಕಾಲ ಕಳೆದ ಸಮಾಧಿ ಸ್ಥಳ ಗಣೇಶಪುರಿಯಲ್ಲೂ ಅವರ ಸ್ಮಾರಕ ಆಶ್ರಮ ತೆರೆದು ಅವರ ಆದರ್ಶದ ಆಶಯಗಳನ್ನ ಅನುಗಾಲವೂ ಜೀವಂತವಾಗಿರಿಸಲು ಶ್ರಮಿಸುತ್ತಿದ್ದಾರೆ. ಕಾಙಂನಗಾಡಿನಲ್ಲಿ ಅವರ ಹೆಸರಿನಲ್ಲಿ ಶಾಲೆ ಹಾಗೂ ಪಾಲಿಟೆಕ್ನಿಕ್ ಕಾಲೇಜೊಂದು ನಡೆಯುತ್ತಿದೆ. ಅದರ ಆದಾಯದಿಂದಲೆ ಆಶ್ರಮದ ಖರ್ಚು ನಿರ್ವಹಿಸುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಭಕ್ತಾದಿಗಳಿಗೆ ಊಟ - ವಸತಿ ಉಚಿತ. ಯಾರೂ ಯಾವ ಕಾರಣಕ್ಕೂ ಹಣಕ್ಕಾಗಿ ಒತ್ತಾಯಿಸರು. ಭಕ್ತರೆ ತಾವಾಗಿ ದೇಣಿಗೆ ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ. ಅನ್ನದಾನ ಮಾಡಿಸಿದರೆ ಅದಕ್ಕೆ ಪ್ರೋತ್ಸಾಹಿಸುತ್ತಾರೆ. ಉಳಿದಂತೆ ನಿತ್ಯದ ಪೂಜೆ-ಪುನಸ್ಕಾರಗಳು ಅನೂಚಾನಾಗಿ ನಡೆಯುತ್ತವೆ.
ಗುರುವನ ಸಹ ನಿತ್ಯಾನಂದರದ್ದೆ ಸೃಷ್ಟಿ. ಬಹುಶಃ ಕರಾವಳಿ ಮುಗಿದು ದಕ್ಷಿಣ ಕೊಡಗಿನಂಚಿನ ಮಲೆಸೀಮೆ ಆರಂಭವಾಗುವ ಪಶ್ಚಿಮಘಟ್ಟದ ಪಾದದಲ್ಲಿ ಅದಿದೆ. ಸ್ವಚ್ಛ ಸುಂದರ ಪರಿಸರವಿರುವ ಅಲ್ಲಿ ಆಶ್ರಮವಾಸಿಗಳ ವಸತಿ ಹಾಗೂ ನಿತ್ಯಾನಂದರ ದೇವಸ್ಥಾನವಿದೆ. ಸದಾ ಎಡಬಿಡದೆ ಸುರಿಯುವ ದೇವಗಂಗೆಯೆಂದೆ ನಂಬಲಾಗಿರುವ ಮಲೆನಾಡಿನಿಂದ ಬೆಟ್ಟದ ಒಡಲು ಸೀಳಿ ಉಕ್ಕಿ ಬರುವ ಅನಂತ ಜಲ ತೀರ್ಥವಿದೆ. ಅದರ ಔಷಧೀಯ ಗುಣಗಳ ಬಗ್ಗೆ ದಂತಕಥೆಗಳಿವೆ. ಮೌನವನ್ನೆ ಹೊದ್ದುಕೊಂಡಂತೆ ಇರುವ ಕೇವಲ ಪ್ರಾಕೃತಿಕ ನಿನಾದಗಳಿಗೆ ಕಿವಿಯಾಗಲು ಹೇಳಿ ಮಾಡಿಸಿದ ಹಸಿರ ಕಣಿವೆಯಂತಹ ಆ ಸ್ಥಳಕ್ಕೆ ಭಕ್ತಾದಿಗಳು ಹಗಲಿನಲ್ಲಿ ಮಾತ್ರ ಭೇಟಿ ಕೊಡಬಹುದು. ಆತ್ಮದ ಅವಲೋಕನಕ್ಕೆ ತಕ್ಕದಾಗಿರುವ ಆ ಜಾಗದಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಅವನ ಈ ಕಾಙಂನಗಾಡಿನ "ಅಜ್ಜನ ಮನೆ"ಯ ಭೇಟಿ ಯಾವುದೆ ನಿರ್ದಿಷ್ಟ ಯೋಜನೆಗಳನ್ನೆ ಹಾಕಿಕೊಳ್ಳದೆ ಹೊರಟಿದ್ದ ಪ್ರವಾಸವನ್ನ ಚಿರಸ್ಮರಣೀಯವಾಗಿಸಿತ್ತು. ಇಂದಿನಿಂದ ಬೇಸರವಾದಾಗಲೆಲ್ಲ ಹೋಗಿದ್ದು ಬರಲೊಂದು ಅಜ್ಜನ ಮನೆ ತನಗೂ ಇದೆ ಅನ್ನುವ ವಿಷಯ ಅವನಿಗೆ ಖಚಿತವಾಯ್ತು.
*****
ಮಲಯಾಳಿಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗೊಂದಲ ಅವನಿಗೆ ಆಶ್ಚರ್ಯ ಹುಟ್ಟಿಸುತ್ತದೆ. ಥೇಟ್ ತುಳುನಾಡಿಗರಂತೆ ಅಸುರ ಕುಲ ತಿಲಕ ಬಲಿ ಚಕ್ರವರ್ತಿ ಅಥವಾ ಮಹಾಬಲಿ ತಮ್ಮ ನಾಡನ್ನ ಪೌರಾಣಿಕ ಕಾಲದಲ್ಲಿ ಆಳುತ್ತಿದ್ದ ಅಂತ ಬಲವಾಗಿ ನಂಬುವ ಅವರೆಲ್ಲ ಇಂದಿಗೂ ಅವನ ಸಲುವಾಗಿಯೆ ವರ್ಷಕ್ಕೊಮ್ಮೆ ಓಣಂ ಹಬ್ಬವನ್ನ ಜಾತ್ಯತೀತವಾಗಿ - ಮತಾತೀತವಾಗಿ ಆಚರಿಸುತ್ತಾರೆ. ನಮ್ಮ ತುಳುನಾಡಿನಲ್ಲಿ ಬಲಿಯ ಆಗಮನ ಸಾರಿ ದುಷ್ಟಶಕ್ತಿಗಳ ನಿವಾರಣೆಗೆ ಆಟಿ ಕಳಿಂಙ ತುಳುವರ ಮನೆ ಮನೆಗೂ ಭೇಟಿ ಕೊಡುವ ಹಾಗೆˌ ಕೇರಳದಲ್ಲಿ ಅದೆ ಕೆಲಸವನ್ನ 'ಓಣ ಪೊಟ್ಟಾನ್' ಮನೆ ಮನೆಗೆ ಆಗಮಿಸಿ ಮಾಡುತ್ತಾನೆ. ಅವನನ್ನ ಸಂಭ್ರಮಾದರ ಭಯ ಭಕ್ತಿಯಿಂದ ಎದುರುಗೊಳ್ಳುವ ಅದೆ ಜನ ಮಹಾಬಲಿಯ ದುರ್ದೆಸೆಗೆ ಕಾರಣನಾದವನನ್ನೆ ಪರಮದೈವವಾಗಿಸಿ ಇಂದು ಆರಾಧಿಸುತ್ತಿರೋದು ಹಾಗೂ ತಮ್ಮ ಪೂರ್ತಿ ರಾಜ್ಯವನ್ನೆ ತಿರುವಾಂಕೂರಿನ ರಾಜರು ಅವನಿಗೆ ಅರ್ಪಿಸಿರುವುದು ವಿಸ್ಮಯ.
ಮಹಾಬಲಿಯನ್ನ ಮೂರಡಿ ಜಾಗ ಕೇಳಿದ ವಾಮನ ಪಾತಾಳಕ್ಕೆ ತುಳಿದ ಜಾಗ ಮಾವೇಲಿಕ್ಕರದಲ್ಲಿರುವ ಮಹಾದೇವ ದೇವಸ್ಥಾನದಲ್ಲೆ ಅನ್ನುವ ಐತಿಹ್ಯವನ್ನೂ ಇಟ್ಟುಕೊಂಡಿದ್ದಾರೆ. ಆದರೆ ಈಗ ಅವರ ಆರಾಧ್ಯದೈವಗಳಲ್ಲೆ ಅಗ್ರಗಣ್ಯನಾಗಿರುವುದು ಶ್ರೀಅನಂತಪದ್ಮನಾಭ ಹಾಗೂ ಗುರುವಾಯೂರಪ್ಪನ ರೂಪದಲ್ಲಿರುವ ಬಲಿಯ ಹಗೆ ಮಹಾವಿಷ್ಣು! ಒಂಥರಾ ತಮ್ಮವನನ್ನ ತುಳಿದವನನ್ನೆ ಆರಾಧಿಸುವ "ಸ್ಟಾಕ್ ಹೋಂ ಸಿಂಡ್ರೋಮ್" ಬಲಿಪಶುಗಳವರು.
( ಇನ್ನೂ ಇದೆ.)
https://youtu.be/NGjaYHqBAaw
21 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೦.👊
20 December 2022
"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೯.👊
ಮುಂದಿನ ದಿನಮಾನಗಳಲ್ಲಿ ಅಲ್ಲಿಂದಲೂ ಆ ಖೂಳರನ್ನ ಸೋಲಿಸಿ ಅಟ್ಟಾಡಿಸಿದ ಅವರ ಯುರೋಪಿಯನ್ ದಾಯಾದಿಗಳಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಖದೀಮರುˌ ಕಡೆಗೆ ಡಚ್ಚರು ಇಂಡೋನೇಷ್ಯಾಕ್ಕೆ ಹೋಗಿ ಮುಟ್ಟಿ ಆ ದ್ವೀಪ ಸಮುಚ್ಛಯವನ್ನ ತಮ್ಮ ವಸಾಹತಾಗಿಸಿಕೊಳ್ಳುವುದನ್ನ ಅನಿವಾರ್ಯಗೊಳಿಸಿದರು. ಹಾಗಂತ ಭಾರತವೇನೂ ಯುರೋಪಿಯನ್ ವಸಾಹತುಕರಣದ ಬಲೆಯಿಂದ ಪಾರಾಗಲಿಲ್ಲˌ ಆದರೆ ದುಷ್ಟರಲ್ಲೆ ಅತಿ ಕಡಿಮೆ ದುರುಳತೆಯಿದ್ದ ಬ್ರಿಟಿಷರ ಪಾಲಾಯಿತು ಅಷ್ಟೆ.
ಶಸ್ತ್ರಗಳಲ್ಲಿ ಆಧುನಿಕರೆನಿಸಿದ್ದ ಹಾಗೂ ಶಿಸ್ತಿನ ಯುದ್ಧತಂತ್ರಗಳನ್ನ ಸೇನೆಯಲ್ಲಿ ಅಳವಡಿಸಿಕೊಂಡು ಹೋರಾಡಿ ಎದುರಾಳಿಗಳನ್ನ ಕಕ್ಕಾಬಿಕ್ಕಿಗೊಳಿಸಿಯೆ ಗೆಲುವನ್ನ ಪ್ರತಿಸಾರಿಯೂ ಖಾತ್ರಿ ಪಡಿಸಿಕೊಳ್ಳುತ್ತಿದ್ದ ಬಲಿಷ್ಠ ಯುರೋಪಿಯನ್ ಶಕ್ತಿಯೊಂದನ್ನ ತನ್ನ ಮುಂದೆ ಮಂಡಿಯೂರಿಸಿದ ಮಾರ್ತಾಂಡ ವರ್ಮನ ಈ ಅಭೂತಪೂರ್ವ ಗೆಲುವು ಬಿಳಿಯರ ದಿಗ್ವಿಜಯ ಯಾತ್ರೆಯ ಕಗ್ಗವಾಗಿರುವ ಯುರೋಪಿಯನ್ ಇತಿ"ಹಾಸ್ಯ""ಅಜ್ಞ"ರ ಸಂಶೋಧನೆಗಳಲ್ಲಿ ಕಾಣಿಸಿಕೊಳ್ಳದಿರಲು ಕಾರಣಗಳಿವೆ. ಆದರೆ ಭಾರತೀಯ ಇತಿಹಾಸ ಸಂಗ್ರಹದಲ್ಲೂ ಈ ಬಗ್ಗೆ ಕೇವಲ ಸೀಮಿತ ವಿವರಣೆಗಳಿರೋದು ದುರಾದೃಷ್ಟಕರ.
ಕೊಚ್ಚಿಯಲ್ಲಿ ಅದಾಗಲೆ ವ್ಯಾಪಾರಿ ಕೋಠಿ ಕಟ್ಟಿಕೊಂಡಿದ್ದ ಡಚ್ ಈಸ್ಟ್ ಇಂಡಿಯಾ ಕಂಪನಿ ಕೊಚ್ಚಿ ಸಂಸ್ಥಾನದ ಆಳರಸನನ್ನ ಕ್ರಮೇಣ ಬೆದರಿಸಿ ತೋಳ್ಬಲದಿಂದ ಕೈಗೊಂಬೆ ಮಾಡಿಕೊಂಡರು. ಅದಾದ ಮೇಲೆ ಅವರ ವಕ್ರದೃಷ್ಟಿ ಪಕ್ಕದ ತಿರುವಾಂಕೂರಿನ ಮೇಲೆ ಬಿತ್ತು. ಎಂದಿನ ಪೊಗರಿನಿಂದ ಅವರು ಹೇರಲು ಹೊರಟ ವ್ಯಾಪಾರಿ ನಿಬಂಧನೆಗಳಿಗೆ ನಾಯರ್ ಕುಲದ ಆಡಳಿತದಲ್ಲಿದ್ದ ತಿರುವಾಂಕೂರು ಸಂಸ್ಥಾನದ ಆಳರಸ ಮಾರ್ತಾಂಡ ವರ್ಮ ಸೊಪ್ಪು ಹಾಕದಿದ್ದಾಗ ಕೆರಳಿದ ಡಚ್ ಅಡ್ಮಿರಲ್ ಎಸ್ಟಾಚುಯಿಸ್ಟ್ ಡೆ ಲೆನಾಯ್
ತಿರುವಾಂಕೂರು ಸಾಮ್ರಾಜ್ಯದ ದಕ್ಷಿಣ ಗಡಿಯಾಗಿದ್ದ ಸಾಂಸ್ಕೃತಿಕವಾಗಿ ಕೇರಳದ ಭಾಗವಾಗಿದ್ದರೂ ಈಗ ರಾಜಕೀಯವಾಗಿ ತಮಿಳುನಾಡಿನ ಭೂಪಟವನ್ನ ಸೇರಿ ಹೋಗಿರುವ ಕೊಳಚ್ಚೆಲ್ಲಿನಿಂದ ನೌಕಾಯುದ್ಧ ಸಾರಿದ.
ತಿರುವಾಂಕೂರಿನವರ ನೌಕಾಬಲವನ್ನ ಕೀಳಂದಾಚಿಸಿದ ಲೆನಾಯ್ ಅತಿಯಾದ ಆತ್ಮವಿಶ್ವಾಸದಿಂದ ದಕ್ಷಿಣದಲ್ಲಿ ಯುದ್ಧ ಆರಂಭಿಸಿದಾಗˌ ಅವನನ್ನ ಎದುರಿಸಲು ದಕ್ಷಿಣದಲ್ಲಿ ಡಚ್ ನೌಕಾಪಡೆಯನ್ನ ಎದುರಿಸಲು ತನ್ನ ದಳಪತಿಗಳಾದ ಆರ್ಮುಗಂ ಪಿಳ್ಳೆ ಹಾಗೂ ಥಾನು ಪಿಳ್ಳೆಯನ್ನ ಛೂ ಬಿಟ್ಟವನೆˌ ತಾನು ಕೊಚ್ಚಿನ್ ಸಾಮ್ರಾಜ್ಯದ ಗಡಿಯೊಳಗಿದ್ದ ಡಚ್ ಠಿಕಾಣಿಗಳನ್ನ ಪುಡಿಗಟ್ಟಲು ನೆಚ್ಚಿನ ಬಂಟನಾಗಿದ್ದ ದಳಪತಿ ಚಂಪಕರಾಮನ್ ಮಾರ್ತಾಂಡ ಪಿಳ್ಳೆಯೊಡನೆ ಭೂ ಮಾರ್ಗವಾಗಿ ಮುನ್ನುಗ್ಗಿ ಬಂದ. ಇವರೊಂದಿಗೆ ಒತ್ತಾಸೆಯಾಗಿ ಪೂರ್ವದ ಘಟ್ಟದಿಂದ ಅದೆ ಕಾಲದಲ್ಲಿ ಇಳಿದು ಬಂದ ಪೊನ್ನಾನ್ ಪಾಂಡ್ಯನ್ ದೇವರ್ ನಾಯಕತ್ವದ ಮಾರವ ಪಡೆ ಕೂಡಾ ಜೊತೆಗೂಡಿತು.
ಈ ಕುಶಲ ಯುದ್ಧತಂತ್ರ ಡಚ್ಚರನ್ನ ಕಂಗಾಲಾಗಿಸಿದ್ದಷ್ಟೆ ಅಲ್ಲˌ ಕೊಚ್ಚಿನ್ನಿನಲ್ಲಿದ್ದ ಐದೂ ಕೋಠಿಗಳಿಂದ ಬೇರು ಕಿತ್ತು ಪರಾರಿಯಾಗಿ ಲೆನಾಯಿಯನ್ನ ಕೂಡಿಕೊಳ್ಳಲು ಕೊಳಚ್ಚೆಲ್ಲಿಗೆ ದೌಡಾಯಿಸಲು ಪ್ರಚೋದಿಸಿತು. ಆದರೆ ಅಲ್ಲಿ ನಡೆದಿದ್ದ ಮೂರು ವಾರಗಳ ರಣಭೀಕರ ಕಾಳಗದಲ್ಲಿ ಡಚ್ಚರು ಸೋತು ಮಾರ್ತಾಂಡ ವರ್ಮನ ಮುಂದೆ ಸಂಪೂರ್ಣವಾಗಿ ಶರಣಾಗಿ ಅವನ ಆದೇಶದಂತೆ ಭಾರತದಿಂದಲೆ ಪೇರಿ ಕಿತ್ತರು. ದಳಪತಿ ಅರ್ಮುಗಂ ಪಿಳ್ಳೆ ಡಚ್ಚರಲ್ಲಿ ಹುಟ್ಟಿಸಿದ್ದ ಆತಂಕ ಅವರನ್ನ ಭಾರತದತ್ತ ಮತ್ತೆಂದೂ ತಿರುಗಿ ನೋಡದಂತೆ ಮಾಡಿತು. ಬಹುಶಃ ಭಾರತೀಯರ ಯುದ್ಧ ಕೌಶಲ್ಯವನ್ನ ಡಚ್ಚರು ತಪ್ಪಾಗಿ ಅಂದಾಜಿಸಿದ್ದರು. ಎರಡೆರಡು ಕಡೆಗಳಿಂದ ಸಂಘಟಿತ ದಾಳಿಯನ್ನ ಅವರು ನಿರೀಕ್ಷಿಸಿರಲಿಕ್ಕಿಲ್ಲ ಅನಿಸುತ್ತೆ. ಕ್ಷಿಪ್ರ ಕಾರ್ಯಾಚರಣೆಯ ಈ ಯದ್ಧತಂತ್ರ ಫಲ ಕೊಟ್ಟು ಅವರನ್ನ ಇಲ್ಲಿಂದ ಒಕ್ಕಲೇಳಿಸಿತು.
ಇದೆ ಆಕ್ರಮಣದ ಹೊತ್ತಿಗೆ ಡಚ್ಚರಿಗೆ ಆರಂಭಿಕ ಆಶ್ರಯ ಕೊಟ್ಟು ಕಡೆಗೆ ಅವರದ್ದೆ ಕೈಗೊಂಬೆಯಾಗಿದ್ದ ಪೇಲವ ರಾಜನ ಆಳ್ವಿಕೆಯಲ್ಲಿದ್ದ ಪೂರ್ತಿ ಕೊಚ್ಚಿ ಸಾಮ್ರಾಜ್ಯವನ್ನ ಕಬಳಿಸಿ ಅದನ್ನ ತಿರುವಾಂಕೂರಿನಲ್ಲಿ ವಿಲೀನಗೊಳಿಸಿಕೊಳ್ಳುವ ಆರಂಭಿಕ ಯೋಜನೆಯನ್ನ ಮಾರ್ತಾಂಡ ವರ್ಮ ಹಾಕಿಕೊಂಡಿದ್ದರೂ ಸಹ ಕಡೆಗೆ ಡಚ್ ಶರಣಾಗತಿ ಹಾಗೂ ಅವರ ಶಾಶ್ವತ ಸ್ಥಳಾಂತರದ ನಂತರ ಅದನ್ನ ಅನಗತ್ಯವೆಂದು ಬಗೆದು ಭೂ ಯುದ್ಧದಿಂದ ತನ್ನ ಪಡೆಯನ್ನ ಹಿಂದೆ ಕರೆಸಿಕೊಂಡ. ವಾಸ್ತವವಾಗಿˌ ಕೇರಳದ ಮುಂದಿನ ರಾಜಕೀಯ ಸ್ಥಿತ್ಯಂತರಗಳನ್ನ ಇಂದು ಅವಲೋಖಿಸಿದಾಗ ಇದೊಂದು ತಪ್ಪು ನಿರ್ಣಯವಾಗಿತ್ತು ಅನಿಸುತ್ತದೆ.
ಅಂದು ಬಯಸದೆ ತನ್ನನ್ನ ಆವರಿಸಿದ ಕಾಳಗದಿಂದಾದ ರಕ್ತಪಾತದಿಂದ ನೊಂದ ಮಾರ್ತಾಂಡ ವರ್ಮ ಅಧಿಕಾರ ತ್ಯಜಿಸಲು ನಿರ್ಧರಿಸಿದ! ತನ್ನ ಸೊತ್ತೆಲ್ಲವನ್ನೂ ಸಾಮ್ರಾಜ್ಯದ ಸಹಿತ ತಿರುವನಂತಪುರದ ಶ್ರೀಅನಂತಪದ್ಮನಾಭಸ್ವಾಮಿಗೆ ಅರ್ಪಿಸಿದ. ಅದ ನಂತರ ತಾನು ಕೇವಲ "ಅನಂತಪದ್ಮನಾಭ ದಾಸ"ನೆಂದು ಕರೆಸಿಕೊಂಡು ಮಲಗಿದ ಭಂಗಿಯಲ್ಲಿರುವ ಆ ಮಹಾವಿಷ್ಣುವಿನ ಪ್ರತಿನಿಧಿಯಾಗಿ ಮಾತ್ರ ತನ್ನನ್ನ ಗುರುತಿಸಿಕೊಂಡುˌ ಭಗವಂತನ ರಾಜ್ಯವಾದ ಆ ತಿರುವಾಂಕೂರು ಸಂಸ್ಥಾನವನ್ನ ದೇವರ ಪರವಾಗಿ ಆಳಲು ಆರಂಭಿಸಿದ. ಅವನ ಮುಂದಿನ ಪೀಳಿಗೆಯವರೂ ನಿಯತ್ತಿನಿಂದ ಇದೆ ನೀತಿಯನ್ನ ಪಾಲಿಸಿ ಪಟ್ಟಾಭಿಷೇಕದ ಬದಲು ಹಿರಣ್ಯಗರ್ಭ ಸಂಸ್ಕಾರದ ವಿಧಿಯನ್ನ ಅನುಸರಿಸುತ್ತಾ ಸದಾಕಾಲಕ್ಕೂ ಸಹ ತಲೆಮಾರುಗಳವರೆಗೂ ಈಗಲೂ "ಪದ್ಮನಾಭದಾಸ"ರಾಗಿಯೆ ಉಳಿದಿದ್ದಾರೆ.
*****
ವಾಸ್ಕೊ-ಡ-ಗಾಮ ಭಾರತದಲ್ಲಿ ತನ್ನ ಮೊದಲ ಹೆಜ್ಜೆಯೂರಿದ್ದ ಕೊಯಿಲಾಂಡಿಯಲ್ಲೆ ಸ್ವತಂತ್ರ್ಯ ಪೂರ್ವದ ೧೮೯೭ರಲ್ಲಿ ಹುಟ್ಟಿದ್ದ ಅನಾಥ ಶಿಶುವೆ ಭಗವಾನ್ ನಿತ್ಯಾನಂದರು. ಹೆತ್ತ ತಂದೆ ತಾಯಿ ಯಾರೆಂದೆ ಗೊತ್ತಿಲ್ಲದ ಆ ಮಗುವನ್ನ ರೈತಾಪಿ ದಂಪತಿಗಳಾಗಿದ್ದ ಉಣ್ಣಿಯಮ್ಮ ಹಾಗೂ ಚಾತು ನಾಯರ್ ದಂಪತಿ ತಮ್ಮ ದತ್ತು ಪುತ್ರನನ್ನಾಗಿ ಸ್ವೀಕರಿಸಿದರು. ಅದಾಗಲೆ ಮನೆ ತುಂಬಾ ಮಕ್ಕಳಿದ್ದರೂ ಇವರನ್ನೂ ಸ್ವಂತ ಮಗನಾಗಿಯೆ ಪರಿಗಣಿಸಿ ರಾಮನ್ ಅನ್ನುವ ಹೆಸರಿಟ್ಟು ಪಾಲಿಸಿದರು. ದುರದೃಷ್ಟವಶಾತ್ ಆರಂಭದಲ್ಲಿ ಇನ್ನೂ ಮೂರುವರ್ಷಗಳ ಪ್ರಾಯವಾಗಿದ್ದಾಗಲೆ ತಮ್ಮ ಸಾಕು ತಂದೆಯನ್ನೂ ಹಾಗೂ ಆರರ ಪ್ರಾಯದಲ್ಲಿ ತಾಯಿಯನ್ನೂ ಕಳೆದುಕೊಂಡು ರಾಮನ್ ಮತ್ತೊಮ್ಮೆ ಅನಾಥನಾದ. ಸಾಯುವ ಮುನ್ನ ಉಣ್ಣಿಯಮ್ಮ ತಾವು ಗೇಣಿಗೆ ಗದ್ದೆಯನ್ನ ಹಿಡಿದಿದ್ದ ವಕೀಲ ಈಶ್ವರ ಅಯ್ಯರ್ರ ಮಡಿಲಿಗೆ ಈ ನತದೃಷ್ಟ ಮಗುವಿನ ಲಾಲನೆ ಪಾಲನೆಯ ಹೊಣೆಯನ್ನೊಪ್ಪಿಸಿ ಕಣ್ಮುಚ್ಚಿದ್ದರಂತೆ.
ಬೆಳೆಯುತ್ತಿದ್ದಂತೆ ಅಧ್ಯಾತ್ಮದತ್ತ ಹೊರಳಿದ ರಾಮನ್ ತನ್ನ ಹದಿಹರೆಯದಲ್ಲೆ ಕೇವಲ ಕೌಪಿನವೊಂದನ್ನಷ್ಟೆ ಉಟ್ಟು ದೇಶಾಂತರ ಹೊರಟ. ಹಿಮಾಲಯದವರೆಗೂ ಅಂಡಲೆದು ಪಡೆದ ಅಧ್ಯಾತ್ಮಿಕ ಸಾಧನೆಯ ನಂತರ ಕಾಙಂನಗಾಡಿನ ಹೊಸದುರ್ಗ ಕೋಟೆಯ ಪರಿಸರದಲ್ಲಿ ನೆಲೆ ನಿಂತ. ಅಲ್ಲಿ ಸ್ವತಃ ತಾನೆ ಮೇಲೆ ಗುಳಿಗನ ನೆಲೆಯಿದ್ಧ ಪುಟ್ಚ ಬೆಟ್ಚವೊಂದರ ಒಡಲಾಳದಲ್ಲಿದ್ದ ಮುರಕ್ಕಲ್ಲುಗಳಲ್ಲಿ ನಲವತ್ತಮೂರು ಗುಹೆಗಳನ್ನ ಕೊರೆದ. ಅದೆ ಇಂದು ಅಲ್ಲಿರುವ ಶ್ರೀನಿತ್ಯಾನಂದಾಶ್ರಮ. ಆ ಗುಹೆಗಳೆ ಧ್ಯಾನಸ್ಥಾನ.
ಅಲ್ಲಿಂದ ಘಟ್ಟದ ದಿಕ್ಕಿನಲ್ಲಿ ಐದು ಕಿಲೋಮೀಟರುಗಳಾಚೆ ಆಗ ಅಲ್ಲಿ ವಾಸವಿದ್ದ ಕೊರಗರ ಮನ ಒಲಿಸಿ ಪಡೆದ ಜಾಗದಲ್ಲಿ ಪ್ರಕೃತಿಯ ಮಡಿಲ ಮಧ್ಯೆ ಅವರೆ ನಿರ್ಮಿಸಿರುವ ಗುರುವನ ಆ ಊರಿನಲ್ಲಿರುವ ಮತ್ತೊಂದು ಅದ್ಭುತ. ದೇವಗಂಗೆಯನ್ನೆ ಅಲ್ಲಿಗೆ ಗುರುಗಳು ಇಳಿಸಿದ್ದಾರೆ ಎಂದು ನಂಬಲಾಗುವ ಗೋಮುಖ ತೀರ್ಥವೊಂದಲ್ಲಿದೆ. ಮಲೆಯ ಆಳದಿಂದ ಉಕ್ಕಿಬರುವ ಆ ನೀರಿನಲ್ಲೇನೋ ಸೊಗಸಿದೆ. ಆ ನೀರಲ್ಲಿ ಮಿಂದರೆ ಮೈ ಮನ ಹಗುರಾಗುವ ಭಾವ ಆವರಿಸುತ್ತದೆ. ಮಿಂದವರಿಗೆ ಹೊಸ ಸುಗಂಧ ಹೊತ್ತ ಅನುಭವವಾಗುತ್ತದೆ. ಇವನೂ ಅಲ್ಲಿಗೆ ಹೋದಾಗ ಆ ಅಕ್ಷಯ ಜಲದಲ್ಲಿ ಮಿಂದು ಉಲ್ಲಸಿತನಾದ. ಆ ಪರಿಸರದ ಹಸಿರು ಆಹ್ಲಾದಕರವಾಗಿತ್ತು.
( ಇನ್ನೂ ಇದೆ.)
https://youtu.be/nqiAwAlP1NM